ಸ್ವಾಗತ ಮತ್ತು ಶುಭಾಶಯಗಳು!
ಭಾರತೀಯ ಸಮಾಜವು ಕೃಷಿ ಆಧಾರಿತ ಸಮಾಜದಿಂದ ಜ್ಞಾನ ಆಧಾರಿತ ಸಮಾಜವಾಗಿ ಪರಿವರ್ತನೆ ಹೊಂದುತ್ತಿದ್ದು ಈಗ ಜಾಗತೀಕರಣಗೊಂಡ ಮಾಹಿತಿ ಸಮಾಜವಾಗಿ ವಿಶ್ವದಲ್ಲಿ ತನ್ನ ಗುರುತನ್ನು ಪಡೆಯುವ ಪ್ರಯತ್ನದಲ್ಲಿದೆ. ಜಾಗತಿಕ ಮಟ್ಟದಲ್ಲಿ ಹೊಸ ಅವಕಾಶಗಳನ್ನು ತೆರೆದಿಡುತ್ತಿರುವ ಈ ಪರ್ವದಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಸಂಪನ್ಮೂಲಗಳೆಂದರೆ ಜ್ಞಾನ ಹಾಗೂ ಕೌಶಲ್ಯಗಳು. ದೇಶದ ಶಕ್ತಿಯು ಆ ದೇಶದ ಶಿಕ್ಷಿತ ಯುವಜನರನ್ನು ಅವಲಂಬಿಸಿರುತ್ತದೆ. ಆದ್ದರಿಂದ ವಿಶ್ವವಿದ್ಯಾಲಯಗಳ ಮೂಲಕ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಗೊಳಿಸುವ ಕೆಲಸದಲ್ಲಿ ತನ್ನೆಲ್ಲ ಶಕ್ತಿಯನ್ನು ಹೂಡುವುದು ದೇಶವು ಮಾಡಬಹುದಾದ ಅತ್ಯಂತ ಪ್ರಬುದ್ಧವಾದ ಹೂಡಿಕೆಯಾಗಿದೆ. Read More