ಕಾಲೇಜು ಅಭಿವೃದ್ಧಿ ಪರಿಷತ್ತು (ಸಿಡಿಸಿ)

ಕಾಲೇಜು ಅಭಿವೃದ್ಧಿ ಪರಿಷತ್ತು, ಯು.ಜಿ.ಸಿ. ಮಾನದಂಡ ಹಾಗೂ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ ಮತ್ತು ಪರಿನಿಯಮಗಳಡಿ ಸ್ಥಾಪಿತವಾಗಿದೆ. ಕಾಲೇಜು ಅಭಿವೃದ್ಧಿ ಪರಿಷತ್ತು ಕುವೆಂಪು ವಿಶ್ವವಿದ್ಯಾಲಯ ಪ್ರಾರಂಭವಾದಾಗಿನಿಂದ ತನ್ನ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ನೀಡುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದೆ. ಕುವೆಂಪು ವಿಶ್ವವಿದ್ಯಾಲಯವು ಆರಂಭದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಕಾಲೇಜುಗಳನ್ನೊಳಗೊಂಡಿದ್ದು, ದಾವಣಗೆರೆ ಜಿಲ್ಲೆ ಅಸ್ಥಿತ್ವಕ್ಕೆ ಬಂದ ನಂತರ ನಾಲ್ಕು ಕಂದಾಯ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿತ್ತು. 2008 ರಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ಸ್ಥಾಪನೆಯಾದ ನಂತರ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಸೀಮಿತವಾಗಿರುತ್ತದೆ. ಪ್ರಸ್ತುತ 94 ಕಾಲೇಜುಗಳಲ್ಲಿ ಪದವಿ ಹಾಗೂ 22 ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿ ವಿಷಯಗಳನ್ನು ಬೋಧಿಸಲಾಗುತ್ತಿದೆ. ಒಟ್ಟು 94 ಕಾಲೇಜುಗಳಲ್ಲಿ 03 ಘಟಕ ಕಾಲೇಜುಗಳು, 01 ಕುವೆಂಪು ವಿಶ್ವವಿದ್ಯಾಲಯದ ನೇರ ಆಡಳಿತಕ್ಕೆ ಒಳಪಟ್ಟ ಕಾಲೇಜು ಹಾಗೂ ಉಳಿದವು ಸಂಯೋಜಿತ ಕಾಲೇಜುಗಳಾಗಿರುತ್ತವೆ. ಸಂಯೋಜಿತ ಕಾಲೇಜುಗಳಲ್ಲಿ 28 ಕಾಲೇಜುಗಳು ಶಾಶ್ವತ ಸಂಯೋಜನೆ ಹೊಂದಿರುತ್ತದೆ.

 

ಕರ್ತವ್ಯಗಳು ಮತ್ತು ಜವಾಬ್ದಾರಿಗಳು

  • ಕಾಲೇಜು ಅಭಿವೃದ್ಧಿ ಪರಿಷತ್ತು ಯುಜಿಸಿ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ, ವಿಶ್ವವಿದ್ಯಾಲಯ ಹಾಗೂ ಸಂಯೋಜಿತ ಕಾಲೇಜುಗಳೊಂದಿಗೆ ಪ್ರಮುಖ ಸಂಪರ್ಕವನ್ನು ಹೊಂದಿರುತ್ತದೆ.
  • ಕಾಲೇಜು ಅಭಿವೃದ್ಧಿ ಪರಿಷತ್ತು ಕಾಲೇಜುಗಳ ಸರ್ವತೋಮುಖ ಅಭಿವೃದ್ಧಿಗಾಗಿ ನೀತಿ ನಿಯಮಗಳನ್ನು ರೂಪಿಸುವ ಪ್ರಾಧಿಕಾರವಾಗಿರುತ್ತದೆ.
  • ಕಾಲೇಜು ಅಭಿವೃದ್ಧಿ ಪರಿಷತ್ತು ಸಂಯೋಜಿತ ಕಾಲೇಜುಗಳಲ್ಲಿನ ಮೂಲಭೂತ ಸೌಲಭ್ಯ (ಶೈಕ್ಷಣಿಕ ಹಾಗೂ ಭೌತಿಕ, ಕಲಿಕೆಯ ಗುಣಮಟ್ಟ, ಬೋಧನೆ ಮತ್ತು ಸಂಶೋಧನೆ ಹಾಗೂ ಕಾಲೇಜುಗಳ ಆವರ್ತಕ ಮೌಲ್ಯಮಾಪನದಂತಹ ವಿಷಯದಲ್ಲಿ ವಿಶ್ವವಿದ್ಯಾಲಯಕ್ಕೆ ಸಲಹೆ ನೀಡುತ್ತದೆ.
  • ಕಾಲೇಜು ಅಭಿವೃದ್ಧಿ ಪರಿಷತ್ತು ಕಾಲೇಜುಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದು, ಕಾಲೇಜುಗಳಲ್ಲಿನ ನೇಮಕಾತಿ ಅನುಮೋದನೆ, ವಿದ್ಯಾರ್ಥಿಗಳ ಸೌಲಭ್ಯಗಳು, ಅನುದಾನಗಳ ಸಮರ್ಪಕ ಬಳಕೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅನುಮೋದಿತ ಯೋಜನೆಗಳು ಹಾಗೂ ನೀತಿಗಳನ್ನು ಅನುಷ್ಠಾನಗೊಳಿಸುವಲ್ಲಿ ಸಹಾಯ ಒದಗಿಸುತ್ತದೆ.
  • ಕಾಲೇಜು ಅಭಿವೃದ್ಧಿ ಪರಿಷತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ನೀತಿ ನಿಯಮಗಳ ಅನುಷ್ಠಾನ ಮತ್ತು ಮಂಜೂರಾದ ಅನುದಾನಗಳ ನಿರ್ವಹಣೆಯ ಮೌಲ್ಯಮಾಪನ ಮಾಡುತ್ತದೆ.
  • ಕಾಲೇಜು ಅಭಿವೃದ್ಧಿ ಪರಿಷತ್ತು, ಕಾಲೇಜುಗಳ ಸಂಯೋಜನೆ, ತಪಾಸಣೆ ವರದಿಗಳ ಪರಿಶೀಲನೆ, ಅಲ್ಲದೆ ಕುಂದು ಕೊರತೆ, ದೂರುಗಳನ್ನು ಪರಿಶೀಲನೆ ಮಾಡುತ್ತದೆ.

ಕಾಲೇಜು ಅಭಿವೃದ್ಧಿ ಪರಿಷತ್ತಿನ ಇತರೆ ಕಾರ್ಯಗಳು

  • ಕಾಲೇಜುಗಳಿಗೆ ಸಂಯೋಜನೆ ನೀಡುವುದು.
  • ಕಾಲೇಜುಗಳಿಗೆ ಸ್ವಾಯುತ್ತತೆ ನೀಡುವುದು.
  • ಕಾಲೇಜುಗಳ ಶ್ರೇಷ್ಠತೆಯ ಸಾಮಥ್ರ್ಯವನ್ನು ಗುರುತಿಸುವುದು (ಸಿ.ಪಿ.ಇ).
  • ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆಯಲು ಉತ್ತೇಜನ ನೀಡುವುದು.
  • ಖಾಸಗಿ ಬಿ.ಇಡಿ. ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳ ನೇಮಕಾತಿ ಅನುಮೋದನೆ.
  • ಕಾಲೇಜುಗಳ ಪ್ರಗತಿಯ ಅಂಕಿ ಅಂಶಗಳನ್ನು ಸಂಗ್ರಹಿಸುವುದು
  • ಕಾಲೇಜುಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅನುದಾನ, ಶಿಕ್ಷಕರ ಶೈಕ್ಷಣಿಕ ಸುಧಾರಣಾ ಕಾರ್ಯಕ್ರಮ (ಎಫ್.ಐ.ಪಿ) ಗಳ ನೆರವು ಪಡೆಯುವಲ್ಲಿ ಸಹಾಯ ಮಾಡುವುದು.
  • ಕಾಲೇಜುಗಳಲ್ಲಿ ವೃತ್ತಿಪರ ಮತ್ತು ಉದ್ಯೋಗದ ದೃಷ್ಠಿಕೋನ ಹೊಂದಿರುವಂತಹ ಕೋರ್ಸ್‍ಗಳನ್ನು ಆರಂಭಿಸುವಂತೆ ಪ್ರಚುರಪಡಿಸುವುದು.
  • ಕಾಲೇಜುಗಳ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಹಾಯ ಮಾಡುವುದು.